ನವದೆಹಲಿ, ಆ 01(DaijiworldNews/MS): ದೇಶದಲ್ಲಿ ನಿಧಾನಗತಿಯಲ್ಲಿ ಹರಡುತ್ತಿರುವ ಮಂಕಿಫಾಕ್ಸ್ ಸೋಂಕುವಿನ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ರೋಗದ ಹರಡುವಿಕೆಯನ್ನು ನಿಭಾಯಿಸಲು ಟಾಸ್ಕ್ ಪೋರ್ಸ್ ರಚನೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಯುಎಇಯಿಂದ ಕೇರಳಕ್ಕೆ ಮರಳಿದ 22ರ ಹರೆಯದ ಯುವಕ ಮಂಗನ ಕಾಯಿಲೆಯಿಂದ ಶನಿವಾರ ಮೃತಪಟ್ಟಿದ್ದು ಇದು ಮಂಕಿಫಾಕ್ಸ್ ನಿಂದಾಗಿ ದೇಶದಲ್ಲಿ ಮೊದಲ ಸಾವಾಗಿದೆ. ಭಾರತದಲ್ಲಿ ಇದುವರೆಗೆ ಒಟ್ಟು ನಾಲ್ಕು ಪ್ರಕರಣಗಳು ವರದಿಯಾಗಿವೆ.
ಈ ಟಾಸ್ಕ್ ಪೋರ್ಸ್ ಕೇಂದ್ರಕ್ಕೆ ಮಂಕಿಫಾಕ್ಸ್ ರೋಗನಿರ್ಣಯದ ಸೌಲಭ್ಯಗಳ ವಿಸ್ತರಣೆ ಮತ್ತು ದೇಶದಲ್ಲಿ ಸೋಂಕಿಗೆ ಲಸಿಕೆಯನ್ನು ಅನ್ವೇಷಿಸಲು ಸರ್ಕಾರಕ್ಕೆ ಮೇಲ್ವಿಚಾರಣೆ ಮಾಡಲು ಮತ್ತು ಮಾರ್ಗದರ್ಶನ ನೀಡಲು ಸಹಾಯ ಮಾಡಲಿದೆ
ಕ್ಯಾಬಿನೆಟ್ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಹೆಚ್ಚುವರಿ ಕಾರ್ಯದರ್ಶಿ (ಪಿಎಂಒ) ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.