ಮುಂಬೈ, ಜು 31(DaijiworldNews/HR): ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಮುಂಬೈನಲ್ಲಿರುವ ಮನೆಗೆ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಇಂದು ದಾಳಿ ನಡೆಸಿ, 9 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ, ಅವರನ್ನು ಬಂಧಿಸಿದ್ದಾರೆ.
ಬೆಳಿಗ್ಗೆ 7 ಗಂಟೆಗೆ, ತನಿಖಾ ಸಂಸ್ಥೆಯ ತಂಡವು ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ಮುಂಬೈನ ಪೂರ್ವ ಉಪನಗರಗಳಲ್ಲಿರುವ ಭಾಂಡುಪ್ನಲ್ಲಿರುವ ಶಿವಸೇನೆ ನಾಯಕನ ಮನೆಗೆ ದಾಳಿ ಮಾಡಿ ಶೋಧವನ್ನು ಪ್ರಾರಂಭಿಸಿತ್ತು.
ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾವುತ್ ಅವರಿಗೆ ಜುಲೈ 20 ಮತ್ತು 27 ರಂದು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಸಂಸದೀಯ ಅಧಿವೇಶನಗಳನ್ನು ಉಲ್ಲೇಖಿಸಿ ಅವರು ಇತ್ತೀಚೆಗೆ ಸಮನ್ಸ್ ಅನ್ನು ತಪ್ಪಿಸಿಕೊಂಡಿದ್ದರು.