ಝಾನ್ಸಿ (ಮಧ್ಯಪ್ರದೇಶ), ಜು 31 (DaijiworldNews/DB): ಹಸುವೊಂದು ಕಾರಿಗೆ ಅಡ್ಡಬಂದ ಪರಿಣಾಮ ವ್ಯಕ್ತಿಯೊಬ್ಬ ಹಸುವನ್ನು ರಕ್ಷಿಸಲು ಹೋಗಿ ಹೆತ್ತವರನ್ನೇ ಕಳೆದುಕೊಂಡ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಯಲ್ಲಿ ನಡೆದಿದೆ.
ಅಂಕುರ್ ಅಗರ್ವಾಲ್ (27 ) ಎಂಬಾತ ತನ್ನ ಹೆತ್ತವರಾದ ಶಯಮ್ ಲಾಲ್ ಅಗರವಾಲ್ (70) ಮತ್ತು ಮಂಜು (60) ಅವರನ್ನು ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಅಂಕುರ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಛತ್ತರ್ಪುರ ಜಿಲ್ಲೆಯ ಝಾನ್ಸಿ-ಖಜುರಾಹೊ ರಸ್ತೆಯಲ್ಲಿ ಅಂಕುರ್ ಕಾರು ಚಲಾಯಿಸುತ್ತಿದ್ದ ವೇಳೆ ಹಸುವೊಂದು ಕಾರಿಗೆ ಅಡ್ಡ ಬಂದಿದೆ. ಈ ವೇಳೆ ಹಸುವಿಗೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ಅಂಕುರ್ ಒಮ್ಮೆಲೆ ಬ್ರೇಕ್ ಹಾಕಿದ್ದಾರೆ. ಇದರಿಂದಾಗಿ ಕಾರು ಪಲ್ಟಿಯಾಗಿದೆ. ಈ ವೇಳೆ ವೃದ್ದ ದಂಪತಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ನೌಗಾಂವ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜಯ್ ವೇದಿಯಾ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮೂವರು ಕೂಡಾ ಝಾನ್ಸಿಯಿಂದ ಛತ್ತರ್ಪುರದ ತಮ್ಮ ಮನೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆ ಮಾಹಿತಿ ಲಭಿಸಿದ ತತ್ಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮೃತದೇಹಗಳನ್ನು ಕಾರಿನಿಂದ ಹೊರ ತೆಗೆದಿದ್ದಾರೆ. ಗಾಯಾಳು ಅಂಕುರ್ನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.