ಬೆಂಗಳೂರು, ಜು 31(DaijiworldNews/HR): ಪರಿಹಾರ, ಸಾಂತ್ವನ ಹೇಳುವ ನಿಟ್ಟಿನಲ್ಲಿಯೂ ತಾರತಮ್ಯ ಮಾಡುವ ಮೂಲಕ ಭಾವನಾತ್ಮಕ ವಿಷಯಗಳ ಮೇಲೆ ರಾಜಕಿಯ ಮಾಡುವುದು ತಪ್ಪು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕರಾವಳಿಯಲ್ಲಿ ಹತ್ಯೆಯಾಗಿರುವ ಎರಡು ಸಮುದಾಯಗಳನ್ನು ಬೆಸೆಯುವ ಕೆಲಸ ಸರ್ಕಾರದಿಂದ ನಡೆಯುತ್ತಿಲ್ಲ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಈ ರೀತಿ ಮಂಗಳೂರು ಭೇಟಿ ನಿರೀಕ್ಷಿಸಿರಲಿಲ್ಲ. ವೋಟ್ ಗಾಗಿ ಕೆಲ ರಾಜಕೀಯ ಪಕ್ಷಗಳು ಭಾವನಾತ್ಮಕ ವಿಚಾರದ ಮೇಲೆ ರಾಜಕೀಯ ಮಾಡಲು ಹೊರಟಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ನಾನು ನಾಳೆ ಮಂಗಳೂರಿಗೆ ತೆರಳುತ್ತಿದ್ದೇನೆ. ಹತ್ಯೆಯಾದ ಮೂರು ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳುತ್ತೇನೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.