ಬೆಂಗಳೂರು, ಜು 31(DaijiworldNews/HR): ಮದ್ಯ ಕುಡಿಯಲು ಹಣ ಕೇಳಿದ ಸ್ನೇಹಿತನನ್ನು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತರನ್ನು ಚಾಮರಾಜಪೇಟೆ ನಿವಾಸಿ ವಸಂತ ಕುಮಾರ್ (25), ಸರಣ್ ರಾಜ್(26) ಮತ್ತು ಮುಗುಂದನ್ (25) ಎಂದು ಗುರುತಿಸಲಾಗಿದೆ.
ಇನ್ನು ಜುಲೈ 27ರಂದು ರಾತ್ರಿ ಪ್ರಶಾಂತ್ ಜತೆ 7 ಮಂದಿ ಆರೋಪಿಗಳು ಸಮೀಪದ ಬಾರ್ನಲ್ಲಿ ಮದ್ಯ ಸೇವಿಸಿದ್ದು, ತಡರಾತ್ರಿ 12.30ರ ಸುಮಾರಿಗೆ ಬಾರ್ನಿಂದ ಮಾರುಕಟ್ಟೆ ಬಂದಾಗ, ಪ್ರಶಾಂತ್, ಕುಡಿಯಲು ಹಣ ಕೊಡುವಂತೆ ಆರೋಪಿಗಳಿಗೆ ಪೀಡಿಸಿದ್ದಾನೆ. ಅದೇ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಪ್ರಶಾಂತ್ ಬಿಯರ್ ಬಾಟಲಿಯಿಂದ ಆರೋಪಿಗಳಿಗೆ ಹೊಡೆದಿದ್ದಾನೆ ಎನ್ನಲಾಗಿದೆ
ಕೃತ್ಯ ಎಸಗಿದ ಬಳಿಕ ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಿದ್ದು, ಈ ಖಚಿತ ಮಾಹಿತಿ ಮೇರೆಗೆ ವಿಶೇಷ ತಂಡ ತಮಿಳುನಾಡಿಗೆ ಹೋದ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.
ಇನ್ನು ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪತ್ತೆ ಕಾರ್ಯ ಮಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.