ನವದೆಹಲಿ, ಜು 31 (DaijiworldNews/DB): ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಡೆಯುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದ ನೀರೊಳಗೆ ಧ್ವಜ ಹಾರಿಸಿದ್ದಾರೆ.
ಜನರಲ್ಲಿ ದೇಶಭಕ್ತಿ ಪ್ರೇರೇಪಿಸುವುದು ಮತ್ತು ರಾಷ್ಟ್ರಧ್ವಜದ ಬಗ್ಗೆ ಗೌರವ ಮೂಡಿಸುವ ಉದ್ದೇಶದಿಂದ ನೀರೊಳಗೆ ಧ್ವಜ ಹಾರಿಸಲಾಗಿದೆ ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ.
75ನೇ ಸ್ವಾತಂತ್ರ್ಯದ ದಿನಾಚರಣೆ ಹಿನ್ನೆಲೆಯಲ್ಲಿ ಹರ್ ಘರ್ ತಿಂರಗಾ ಅಭಿಯಾನ ನಡೆಯಲಿದ್ದು, ಮನೆ ಮನೆಗಳಲ್ಲಿಯೂ ದೇಶದ ರಾಷ್ಟ್ರಧ್ವಜ ಹಾರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಜುಲೈ ೨೨ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಧ್ವಜ ಉತ್ಪಾದನೆಗೆ ಈಗಾಗಲೇ ಸ್ವಸಹಾಯ ಗುಂಪುಗಳು ತೊಡಗಿಸಿಕೊಂಡಿವೆ. ಸ್ಥಳೀಯ ಟೈಲರಿಂಗ್ ಘಟಕ ಮತ್ತು ಎಂಎಸ್ಎಂಇಗಳನ್ನು ಕೂಡಾ ಇದಕ್ಕಾಗಿ ನಿಯೋಜನೆ ಮಾಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಧ್ವಜಗಳನ್ನು ಪೂರೈಸಲು ಈಗಾಗಲೇ ಜವಳಿ ಸಚಿವಾಲಯವು ಧ್ವಜ ಉತ್ಪಾದಕರನ್ನು ಗುರುತಿಸಿದೆ. ಆಗಸ್ಟ್ 13ರಿಂದ 15ರವರೆಗೆ ದೇಶಾದ್ಯಂತ ಮನೆ ಮನೆಗಳಲ್ಲಿ ಧ್ವಜಗಳನ್ನು ಹಾರಿಸುವ ಅಭಿಯಾನ ನಡೆಯಲಿದೆ.