ಬಳ್ಳಾರಿ, ಜು 30 (DaijiworldNews/DB): ಪ್ರೇಯಸಿಯ ಸಾವಿನಿಂದ ಮನನೊಂದು ಪ್ರಿಯಕರ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಬಳ್ಳಾರಿಯ ಪಟೇಲ್ ನಗರದಲ್ಲಿ ನಡೆದಿದೆ.
ಮಂಜುನಾಥ್ (34) ಆತ್ಮಹತ್ಯೆ ಮಾಡಿಕೊಂಡಾತ. ಈತನ ಪ್ರಿಯತಮೆ ನಾಸಿಯಾ ಬಾನು ಕಳೆದ ವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದ ನೊಂದ ಮಂಜುನಾಥ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ನಡುವೆ ಮನಸ್ತಾಪವಾದ ಕಾರಣ ನಾಸಿಯ ಬಾನು ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ.
ನಾಸಿಯಾಳಿಗೆ ಈ ಹಿಂದೆ ಮದುವೆಯಾಗಿದ್ದು, ಒಂದು ಮಗು ಇದೆ. ಆದರೆ ದಾಂಪತ್ಯದಲ್ಲಿ ಮನಸ್ತಾಪವಾಗಿದ್ದರಿಂದ ವಿಚ್ಚೇದನ ಪಡೆದು ಪತಿಯಿಂದ ದೂರವಾಗಿದ್ದಳು. ಬಳಿಕ ಮಂಜುನಾಥ್ನ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕಳೆದ ಸುಮಾರು ನಾಲ್ಕು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದು, ಮದುವೆಗೂ ಮುಂದಾಗಿದ್ದರು ಎನ್ನಲಾಗಿದೆ. ಆದರೆ ಇದೀಗ ಇಬ್ಬರ ಬದುಕು ಸಾವಿನಲ್ಲಿ ಅಂತ್ಯವಾಗಿದೆ.