ಕೇರಳ, ಜು 30(DaijiworldNews/HR): ತೃತೀಯ ಲಿಂಗಿಗಳಿಗೆ ಕ್ರೀಡಾಕೂಟಗಳಲ್ಲಿ ಪ್ರತ್ಯೇಕ ವರ್ಗವಿಲ್ಲದಿದ್ದರೆ, ಅವರು ಆಯ್ಕೆ ಮಾಡಿದ ಲಿಂಗ ವಿಭಾಗದಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ.
ತೃತೀಯಲಿಂಗಿಯೊಬ್ಬರು ಜಿಲ್ಲಾ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿರುವ ಸಲ್ಲಿಸಿದ ಮನವಿಯ ಮೇಲೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಜಿ. ಅರುಣ್, ಎಲ್ಲಾ ತೃತೀಯಲಿಂಗಿಗಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಮಾನ ಹಕ್ಕು ಇದೆ ಹಾಗಾಗಿ ಅವರಿಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದಿದ್ದಾರೆ.
ಇನ್ನು ಸಂಘಟಕರು ತೃತೀಯ ಲಿಂಗಿಗಳಿಗೆ ವ್ಯವಸ್ಥೆ ಮಾಡದಿದ್ದರೆ, ಅರ್ಜಿದಾರರು ಅವರು ಆಯ್ಕೆ ಮಾಡಿದ ವಿಭಾಗದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು ಎಂದು ತಿಳಿಸಿದ್ದಾರೆ.