ಬೆಂಗಳೂರು, ಜು 30 (DaijiworldNews/MS): 2021-22ನೇ ಸಾಲಿನ ಸಿಇಟಿ ಪರೀಕ್ಷಾ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಪ್ರಕಟಿಸಿದ್ದಾರೆ.
ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಕಳೆದ ತಿಂಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಮಲ್ಲೇಶ್ವರಂನಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಪ್ರಕಟಿಸಿದ್ದಾರೆ. ಪ್ರಾಧಿಕಾರದ ವೆಬ್ಸೈಟ್ www.karresults.nic.in/ ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ.
" ಪ್ರತಿ ವರ್ಷ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸುತ್ತಿದ್ದರು.ಬಹಳ ವಿಶೇಷ ಎಂಬಂತೆ ಬಾರಿ ಹೆಚ್ಚಿನ ರ್ಯಾಂಕ್ ಗಳನ್ನು ಬಾಲಕರನ್ನು ಪಡೆದು ಮೇಲುಗೈ ಸಾಧಿಸಿದ್ದಾರೆ "ಎಂದು ಸಚಿವರು ಫಲಿತಾಂಶ ಪ್ರಕಟನೆ ವೇಳೆ ತಿಳಿಸಿದ್ದಾರೆ.