ವಡೋಧರ, ಜು 29 (DaijiworldNews/MS): ಬೋರ್ವೆಲ್ನೊಳಗೆ ಬಿದ್ದ 12 ವರ್ಷದ ಬಾಲಕಿಯನ್ನು ಸುರಕ್ಷಿತವಾಗಿ ಹೊರ ತೆಗೆದ ಘಟನೆ ಗುಜರಾತಿನ ಸುರೇಂದ್ರನಗರ ಧಂಗಧ್ರ ತಾಲೂಕಿನ ಗಜರ್ನವವ್ ಗ್ರಾಮದಲ್ಲಿ ನಡೆದಿದೆ.
ಬೋರ್ವೆಲ್ ಸುಮಾರು 400 ಅಡಿ ಆಳವಿದ್ದು. ಬಾಲಕಿ 60 ಅಡಿ ಎತ್ತರದಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು.
ತಕ್ಷಣ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಬಾಲಕಿಯನ್ನು ಹೊರತರಲು ಹರಸಾಹಸ ಪಡಬೇಕಾಯಿತು. ರಕ್ಷಣಾ ತಂಡ ಸಾಕಷ್ಟು ಪ್ರಯತ್ನಗಳ ನಂತರ ಸುರಕ್ಷಿತವಾಗಿ ಬಾಲಕಿಯನ್ನು ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ.