ಬೆಂಗಳೂರು, ಜು 29 (DaijiworldNews/HR): ಸುರತ್ಕಲ್ನಲ್ಲಿ ನಡೆದಿರುವ ಫಾಝಿಲ್ ಹತ್ಯೆ ಕೇವಲ ಕೊಲೆಯಲ್ಲ, ಇದು ಪೂರ್ವನಿಯೋಜಿತ ಕೃತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಫಾಝಿಲ್ ಕೊಲೆ ಪ್ರಕರಣದಲ್ಲಿ ಯಾವ ಮಾಹಿತಿ ಸಿಕ್ಕಿಲ್ಲ. ಅಧಿಕಾರಿಗಳಿಂದ ನಾನು ಮಾಹಿತಿಯನ್ನು ಪಡೆಯುತ್ತೇನೆ. ಸರ್ಕಾರ ಮೂರು ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತೇವೆ ಎಂದರು.
ಇನ್ನು ನಾವು ತನಿಖೆಯಿಂದ ಹಿಂದೆ ಬಿದ್ದಿಲ್ಲ. ಫಾಝಿಲ್ ಹತ್ಯೆಯನ್ನು ನಾನು ಕೇವಲ ಕೊಲೆ ಎಂದು ನೋಡುತ್ತಿಲ್ಲ. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.