ಬೆಂಗಳೂರು, ಜು 29(DaijiworldNews/MS): ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಇತ್ತ ಹಿಂದೂಗಳಿಗೂ ರಕ್ಷಣೆಯಿಲ್ಲ,ಅತ್ತ ಮುಸಲ್ಮಾನರಿಗೂ ರಕ್ಷಣೆಯಿಲ್ಲ. ಸರ್ಕಾರ ಎನ್ನುವುದು ಸತ್ತಿದೆಯೆ? ಬದುಕಿದೆಯೆ? ಎಂದು ಕಾಂಗ್ರೆಸ್ ನ ಮುಖಂಡ ದಿನೇಶ್ ಗುಂಡುರಾವ್ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, " ಪ್ರವೀಣ್ ನೆಟ್ಟಾರು ಹತ್ಯೆ ಘಟನೆ ಮಾಸುವ ಮುನ್ನವೇ ಸುರತ್ಕಲ್ನಲ್ಲಿ ಫಾಝೀಲ್ ಎಂಬ ಯುವಕನ ಕೊಲೆ ನಡೆದಿದೆ. ಕರಾವಳಿ ಭಾಗದಲ್ಲಿ ಒಂದೇ ವಾರದಲ್ಲಿ ನಡೆದ ಮೂರನೇ ಹತ್ಯೆಯಿದು. ರಾಜ್ಯದಲ್ಲಿ ಸರ್ಕಾರ ಎನ್ನುವುದು ಸತ್ತಿದೆಯೆ? ಬದುಕಿದೆಯೆ? ಮುಖ್ಯಮಂತ್ರಿಗಳು ಮಂಗಳೂರು ಪ್ರವಾಸದಲ್ಲಿದ್ದಾಗಲೇ ಫಾಜಿಲ್ ಹತ್ಯೆ ನಡೆದಿರುವುದು ವ್ಯವಸ್ಥೆಯ ಅಣಕ" ಎಂದು ವ್ಯಂಗ್ಯವಾಡಿದ್ದಾರೆ
"ಈ ಸರ್ಕಾರದಲ್ಲಿ ಇತ್ತ ಹಿಂದೂಗಳಿಗೂ ರಕ್ಷಣೆಯಿಲ್ಲ,ಅತ್ತ ಮುಸಲ್ಮಾನರಿಗೂ ರಕ್ಷಣೆಯಿಲ್ಲ. ಎಲ್ಲಿ,ಯಾವಾಗ,ಯಾರ ಕೊಲೆಯಾಗುತ್ತೋ ಎಂಬ ಭಯ ಜನರಲ್ಲಿ ಮನೆ ಮಾಡಿದೆ. ಇಂತಹದ್ದೊಂದು ವಿಷಮಕಾರಿ ಸ್ಥಿತಿಯನ್ನು ರಾಜ್ಯದ ಜನ ಹಿಂದೆಂದೂ ಕಂಡಿರಲಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಈ ಅನಾಹುತಕಾರಿ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ " ಎಂದು ಆರೋಪಿಸಿದ್ದಾರೆ.