ನವದೆಹಲಿ, ಜು 29 (DaijiworldNews/HR): ಭಾರತೀಯ ವಾಯುಪಡೆಯ ಎಂಐಜಿ-21 ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್ಗಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬರ್ಮೆರ್ ನಲ್ಲಿ ನಡೆದಿದೆ.
ಎಂಐಜಿ-21 ಯುದ್ಧ ವಿಮಾನ ಹಾರಾಟದ ವೇಳೆ ಭಿಮ್ಡಾ ಗ್ರಾಮದ ಬಳಿ ಪತನಗೊಂಡಿದ್ದು, ಹೊತ್ತಿ ಉರಿದ ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದಾರೆ.
ಇನ್ನುಈ ಘಟನೆ ಬಗ್ಗೆ ಸಮಗ್ರ ತನಿಖೆಗೆ ವಾಯುಪಡೆ ಆದೇಶಿಸಿದ್ದು, ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರಿಗೆ ಕರೆ ಮಾಡಿ ಘಟನೆ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗಿದೆ.