ಕೋಲ್ಕತ್ತಾ, ಜು 27 (DaijiworldNews/MS): ಶಿಕ್ಷಕರ ನೇಮಕಾತಿ (ಎಸ್ಎಸ್ಸಿ) ಹಗರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಳ ಕೈಗಾರಿಕೆ ಸಚಿವ ಪಾರ್ಥ ಚಟರ್ಜಿ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಸಂಪುಟದಿಂದ ವಜಾಗೊಳಿಸಿದ್ದಾರೆ.
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಎಸ್ಎಸ್ಸಿ ಹಗರಣದ ಆರೋಪಿ ಬಂಗಾಳ ಸಚಿವ ಪಾರ್ಥ ಚಟರ್ಜಿಯನ್ನು ಜುಲೈ 28ರಿಂದ ಎಲ್ಲಾ ಸ್ಥಾನ, ಜವಾಬ್ದಾರಿಗಳಿಂದ ತೆರವು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ.
ಹಿರಿಯ ಸಚಿವ ಪಾರ್ಥ ಚಟರ್ಜಿ ನಮಗೆಲ್ಲರಿಗೂ ಮುಜುಗರ ಮತ್ತು ಅವಮಾನ ತಂದೊಡ್ಡಿದ್ದಾರೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹಾಗೂ ಇತರ ನಾಯಕರು ಒತ್ತಾಯಿಸಿದ್ದರು.