ನವದೆಹಲಿ, ಜು 27 (DaijiworldNews/MS): ಮತದಾರರ ಪಟ್ಟಿ ಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಚುನಾವಣಾ ಗುರುತಿನ ಚೀಟಿ ಪಡೆದುಕೊಳ್ಳಲು 17 ವರ್ಷಕ್ಕಿಂತ ಮೇಲ್ಪಟ್ಟ ಯುವಕರು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
1950ರ ಜನಪ್ರತಿನಿಧಿ ಕಾಯ್ದೆಯ ಸೆ.19 ಮತ್ತು ಸಂವಿಧಾನದ 326ನೇ ಅನುಚ್ಛೇಧದ ಪ್ರಕಾರ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮತದಾರರ ಪಟ್ಟಿ ಇದ್ದು ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಕನಿಷ್ಠ ವರ್ಷ 18 ವರ್ಷಗಳಾಗಿತ್ತು. ಆದರೆ ಜನವರಿ 1 ರಂದು 18 ವರ್ಷ ವಯಸ್ಸನ್ನು ತಲುಪುವ ಪೂರ್ವ-ಅವಶ್ಯಕ ಮಾನದಂಡವನ್ನು ಅನುಸರಿಸಬೇಕಾಗಿಲ್ಲ. ೧೭ ವರ್ಷ ಮೇಲ್ಪಟ್ಟವರು ತಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ನೇತೃತ್ವದ ಭಾರತಿಯ ಚುನಾವಣಾ ಆಯೋಗ , ಯುವಕರು ತಮ್ಮ ಮುಂಗಡ ಅರ್ಜಿಗಳನ್ನು ಸಲ್ಲಿಸಲು ಅನುಕೂಲ ಕಲ್ಪಿಸಲು ಇದಕ್ಕೆ ಬೇಕಾಗದ ಸಕ್ರಿಯ ತಂತ್ರಜ್ಞಾನ ರಿಹಾರಗಳನ್ನು ರೂಪಿಸಲು ರಾಜ್ಯಗಳ ಎಲ್ಲಾ ಸಿಇಒಗಳು/ಇಆರ್ಒಗಳು/ಎಇಆರ್ಒಗಲಿಗೆ ನಿರ್ದೇಶನ ನೀಡಿದೆ.