ನವದೆಹಲಿ, ಜು 27 (DaijiworldNews/HR): ತಾಂತ್ರಿಕ ತೊಂದರೆಯಿಂದ ಸುದ್ದಿಯಾಗಿದ್ದಂತ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗೆ ಇಂದಿನಿಂದ ಎಂಟು ವಾರಗಳವರೆಗೆ ಅನುಮೋದಿತ ಬೇಸಿಗೆ ವೇಳಾಪಟ್ಟಿಯ ಶೇ. 50ರಷ್ಟು ಸ್ಪೈಸ್ ಜೆಟ್ ನಿರ್ಗಮನವನ್ನು ನಿರ್ಬಂಧಿಸಿ ಡಿಜಿಸಿಎ ಆದೇಶಿಸಿದೆ.
ಈ ಕುರಿತು ಡಿಜಿಸಿಎ ಆದೇಶ ಹೊರಡಿಸಿದ್ದು, ಸ್ಪೈಸ್ ಜೆಟ್ ಸಲ್ಲಿಸಿದ ವಿವಿಧ ಸ್ಥಳ ಪರಿಶೀಲನೆಗಳು, ತಪಾಸಣೆಗಳು ಮತ್ತು ಶೋಕಾಸ್ ನೋಟಿಸ್ಗೆ ಪ್ರತ್ಯುತ್ತರವನ್ನು ಗಮನದಲ್ಲಿಟ್ಟುಕೊಂಡು ಸ್ಪೈಸ್ ಜೆಟ್ನ ನಿರ್ಗಮನಗಳ ಸಂಖ್ಯೆಯನ್ನು ಈ ಆದೇಶದ ದಿನಾಂಕದಿಂದ 8 ವಾರಗಳವರೆಗೆ ಬೇಸಿಗೆ ಶೆಡ್ಯೂಲ್ 2022 ರ ಅಡಿಯಲ್ಲಿ ಅನುಮೋದಿಸಲಾದ ನಿರ್ಗಮನಗಳ ಸಂಖ್ಯೆಯ 50% ಕ್ಕೆ ಸೀಮಿತಗೊಳಿಸಿದೆ ಎಂದು ತಿಳಿಸಿದೆ.
ಇನ್ನು ಇಂದಿನಿಂದ ಒಂದು ವಾರಗಳ ಕಾಲ ಶೇ.50ರಷ್ಟು ಸ್ಪೈಸ್ ಜೆಟ್ ವಿಮಾನಗಳು ಮಾತ್ರವೇ ಯಾನ ನಡೆಸಲಿವೆ.