ನೋಯ್ಡಾ, ಜು 27 (DaijiworldNews/MS): ದೆಹಲಿಯ ಬಳಿಕ ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಂಕಿ ಫಾಕ್ಸ್ ನ ಶಂಕಿತ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ರೋಗಿಯು 47 ವರ್ಷದ ಮಹಿಳೆಯಾಗಿದ್ದು, ಮಂಗಳವಾರ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ, ನಂತರ ಅವರ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.
'ಮಾದರಿಗಳನ್ನು ಲಕ್ನೋಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ರೋಗಿಯು ಪ್ರಸ್ತುತ ಹೋಮ್ ಐಸೋಲೇಷನ್ನಲ್ಲಿದ್ದಾರೆ. ಪರೀಕ್ಷಾ ಫಲಿತಾಂಶಗಳು ಹೊರಬಂದ ನಂತರವೇ ಮಂಕಿಪಾಕ್ಸ್ ಅನ್ನು ದೃಢಪಡಿಸಬಹುದು' ಎಂದು ಸ್ಥಳೀಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೋಗಿಯ ಪ್ರಯಾಣದ ಇತಿಹಾಸವನ್ನು ಇನ್ನೂ ದೃಢೀಕರಿಸಲಾಗಿಲ್ಲ.
ಕೇರಳದಲ್ಲಿ ಮೂರು ಮತ್ತು ದೆಹಲಿಯಲ್ಲಿ ಒಂದು ಸೇರಿ ಭಾರತದಲ್ಲಿ ಇದುವರೆಗೆ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ಧೃಢಪಟ್ಟಿದೆ.