ಶಿವಮೊಗ್ಗ, ಜು 27 (DaijiworldNews/DB): ಸರ್ಕಾರ ಮತ್ತು ಹಿಂದೂಗಳು ಬಲಹೀನರು ಎಂದು ಯಾರೂ ಅಂದುಕೊಳ್ಳುವ ಅಗತ್ಯವಿಲ್ಲ. ಕಾನೂನಿಗೆ ಗೌರವ ಕೊಟ್ಟು ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ ಹಿಂದೂಗಳು ಸುಮ್ಮನಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಕೊಲೆ ಖಂಡನೀಯ. ಯಾವುದೇ ತಪ್ಪು ಮಾಡದವರನ್ನು ಟಾರ್ಗೆಟ್ ಮಾಡಿ ಮುಸ್ಲಿಂ ಗೂಂಡಾಗಳು ಕೊಲೆ, ಹಲ್ಲೆ ಮಾಡುತ್ತಿದ್ದಾರೆ. ಒಂಟಿಯಾಗಿದ್ದಾಗ ಇಂತಹ ಕೃತ್ಯ ಎಸಗುತ್ತಿರುವುದು ನಡೆಯುತ್ತಿದೆ ಎಂದರು.
ಇಂತಹ ಕೃತ್ಯಗಳನ್ನು ಎಲ್ಲಾ ರಾಜಕೀಯ ಪಕ್ಷಗಳೂ ಖಂಡಿಸಬೇಕು. ಕೃತ್ಯ ಎಸಗಿದವರಿಗೆ ಬೆಂಬಲ ಕೊಡಬಾರದು. ಸಿಎಂ ಮತ್ತು ಗೃಹ ಸಚಿವರು ಈಗಾಗಲೇ ಕ್ರಮದ ಭರವಸೆ ನೀಡಿದ್ದಾರೆ. ನಾಳೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸುತ್ತೇನೆ ಎಂದವರು ತಿಳಿಸಿದರು.