ಬೆಂಗಳೂರು, ಜು 27 (DaijiworldNews/DB): ಜಿಹಾದ್ ಮಾನಸಿಕತೆಗೆ ಕೊನೆ ಎಂಬುದಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ಇದನ್ನು ಕಿತ್ತು ಹಾಕಲು ನಾವು ಬದ್ದರಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರವೀಣ್ ಕೊಲೆ ವಿಚಾರವಾಗಿ ಮಾತನಾಡಲು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ತೆರಳುತ್ತಿದ್ದೇನೆ. ಮೊನ್ನೆ ಚಂದ್ರು, ಹರ್ಷ, ಇಂದು ಪ್ರವೀಣ, ನಾಳೆ ಇನ್ಯಾರೋ. ನಾವು ಕೇವಲ ಅಧಿಕಾರಕ್ಕೆ ಬಂದಿಲ್ಲ, ಕಾರ್ಯಕರ್ತರ ಭಾವನೆಗಳ ಜೊತೆಗಿದ್ದೇವೆ ಎಂಬುದು ಅಷ್ಟೇ ಮುಖ್ಯ ಎಂದರು.
ಜಿಹಾದ್ ವಿರುದ್ದ ಹೋರಾಡುವುದು ಅಗತ್ಯ. ಇದಕ್ಕಾಗಿ ವ್ಯವಸ್ಥೆಯೊಂದನ್ನು ಸಿದ್ದಗೊಳಿಸಬೇಕಿದೆ. ಜಿಹಾದ್ ಮಾನಸಿಕತೆಯನ್ನು ಕಿತ್ತು ಹಾಕಬೇಕಿದೆ. ಅದಕ್ಕೆ ನಾವು ಬದ್ದರಿದ್ದೇವೆ ಎಂದವರು ತಿಳಿಸಿದರು.