ಚೆನ್ನೈ, ಜು 27 (DaijiworldNews/HR): ತಮಿಳುನಾಡಿನಲ್ಲಿ 17 ವರ್ಷದ ಮತ್ತೋರ್ವ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಎರಡೇ ವಾರದಲ್ಲಿ ನಡೆದ 4ನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಮೃತ ವಿದ್ಯಾರ್ಥಿನಿಯನ್ನು11ನೇ ತಗತಿಯ ವಿದ್ಯಾರ್ಥಿನಿ ಕಣ್ಣನ್ ಮತ್ತು ಮೀನಾ ದಂಪತಿಯ ಪುತ್ರಿ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿಯ ಪೋಷಕರು ಪಟಾಕಿ ಕಾರ್ಖಾನೆಯಲ್ಲಿ ದಿನಗೂಲಿ ನೌಕರರಾಗಿದ್ದು, ಶಾಲೆಯಿಂದ ಮನೆಯಿಂದ ಬಂದ ಕೂಡಲೇ ನೇಣಿಗೆ ಶರಣಾಗಿದ್ದಾಳೆ. ಈ ವೇಳೆ ವಿದ್ಯಾರ್ಥಿನಿಯ ಅಜ್ಜಿ ಮನೆಯಿಂದ ಹೊರಹೋಗಿದ್ದರು. ಮತ್ತೆ ಮನೆಗೆ ಬಂದಾಗ ಮೊಮ್ಮಗಳ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.
ಇನ್ನು ಸೋಮವಾರ ಕುಡಲೂರು ಜಿಲ್ಲೆಯಲ್ಲಿ 12ನೇ ತರಗತಿಯ ಮತ್ತೊರ್ವ ವಿದ್ಯಾರ್ಥಿನಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು, ಅದಕ್ಕೂ ಒಂದು ದಿನದ ಹಿಂದೆಯಷ್ಟೇ ತಿರುವಳ್ಳುರು ತಿರುಟ್ಟಣಿ ಮೂಲದ ಸೇಕ್ರೆಡ್ ಹಾರ್ಟ್ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ತನ್ನ ಹಾಸ್ಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಕಳೆದ ಜುಲೈ 13ರಂದು ಕಲ್ಲಕುರಿಚಿ ಜಿಲ್ಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿನಿಯ ಸಾವಿನ ಬಗ್ಗೆಯೂ ಸಿಐಡಿ ತನಿಖೆ ನಡೆಸುತ್ತಿದ್ದು, ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಯಾಗಿದ್ದು, ಅನೇಕ ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ನಡೆಸಿದ್ದರು.