ನವದೆಹಲಿ, ಜು 26 (DaijiworldNews/DB): ನಾನು ಯಾವುದೇ ಪಕ್ಷವನ್ನು ಸೇರುವುದಿಲ್ಲ. ಸ್ವತಂತ್ರನಾಗಿಯೇ ಉಳಿಯುತ್ತೇನೆ ಎಂದು 2022ರ ರಾಷ್ಟ್ರಪತಿ ಚುನಾವಣೆಯಲ್ಲಿ ಪರಾಜಿತ ಯುಪಿಎ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಘೋಷಿಸಿದ್ದಾರೆ.
ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಸುದ್ದಿಸಂಸ್ಥೆಯೊಂದರ ಜೊತೆ ಇಂದು ಮಾತನಾಡಿದ ಅವರು, ಯಾವುದೇ ಪಕ್ಷ ಸೇರುವ ಇಚ್ಚೆ ಇಲ್ಲ. ಪಕ್ಷೇತರನಾಗಿಯೇ ಉಳಿಯುತ್ತೇನೆ ಎಂದರು.
ಚುನಾವಣೆ ಬಳಿಕ ಟಿಎಂಸಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವೈಯಕ್ತಿಕ ಆಧಾರದಲ್ಲಿ ಪಕ್ಷದ ನಾಯಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅದರ ಬದಲು ಯಾವುದೇ ಮಾತುಕತೆ ಆಗಿಲ್ಲ. ಸಾರ್ವಜನಿಕ ಜೀವನದಲ್ಲಿ ನನ್ನ ಸಕ್ರಿಯತೆ ಹೇಗಿದೆ ಎಂಬುದನ್ನು ನೋಡುತ್ತೇನೆ ಎಂದು ತಿಳಿಸಿದರು.
ಸಕ್ರಿಯ ರಾಜಕಾರಣದಿಂದ ಸನ್ಯಾಸ ತೆಗೆದುಕೊಳ್ಳುತ್ತಿದ್ದು, ಬಿಜೆಪಿಯೊಂದಿಗಿನ ಎಲ್ಲಾ ಬಂಧಗಳಿಂದ ಮುಕ್ತನಾಗಿದ್ದೇನೆ ಎಂದು ಯಶವಂತ ಸಿನ್ಹಾ 2018ರಲ್ಲಿ ಹೇಳಿದ್ದರು. ಬಳಿಕ 2021ರಲ್ಲಿ ತೃಣಮೂಲ ಕಾಂಗ್ರೆಸ್ಗೆ ಸೇಪ್ಡೆಗೊಂಡಿದ್ದರು. 2022ರಲ್ಲಿ ಟಿಎಂಸಿಗೆ ರಾಜೀನಾಮೆ ನೀಡಿ ವಿಪಕ್ಷಗಳ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು.