ತಮಿಳುನಾಡು, ಜು 26 (DaijiworldNews/HR): ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಯಾವ ಗುಂಪನ್ನು ಮೊದಲು ಸನ್ಮಾನಿಸಲಾಗುತ್ತದೆ ಎಂಬ ಬಗ್ಗೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ಬಳಿಕ ಹಿಂಸಾತ್ಮಕ ಘರ್ಷಣೆ ನಡೆದಿರುವ ಘಟನೆ ಮಧುರೈನ ಉಸುಲಂಪಟ್ಟಿಯಲ್ಲಿ ನದೆದಿದೆ.
ಈ ಘಟನೆ ವಳಂದೂರು ಅಂಗಲ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದ್ದು, ದೇವಾಲಯದ ಪ್ರತಿಷ್ಠಾಪನೆ ನಡೆದ 48 ನೇ ದಿನದಂದು ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಒಂದೇ ಸಮುದಾಯಕ್ಕೆ ಸೇರಿದ ಎರಡು ಗುಂಪುಗಳು ಈ ಹಿಂದೆ ವೈರತ್ವವನ್ನು ಹೊಂದಿದ್ದವು ಮತ್ತು ಮೊದಲು ಯಾರನ್ನು ಸನ್ಮಾನಿಸಬೇಕು ಎಂಬ ಬಗ್ಗೆ ವಾದಿಸಲು ಪ್ರಾರಂಭವಾಗಿ, ವಾದಗಳು ಹಿಂಸಾತ್ಮಕ ಘರ್ಷಣೆಗಳಾಗಿ ಹೆಚ್ಚಿದವು.
ಇನ್ನು ಘರ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ 10 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.