ಬೆಂಗಳೂರು, ಜು 26 (DaijiworldNews/HR): ಕಾಂಗ್ರೆಸ್ನವರಿಗೆ ಇಷ್ಟು ದಿನ ಬಾಯಿ ಬಡ್ಕೊಂಡು ಸಾಕಾಗಿದ್ದು, ಇದೀಗ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಇ.ಡಿ. ವಿಚಾರಣೆ ನಡೆಸುವುದನ್ನು ವಿರೋಧಿಸಿ ಕಾಂಗ್ರೆಸ್ ಇಂದು ಮೌನ ಸತ್ಯಾಗ್ರಹ ಹಮ್ಮಿಕೊಂಡಿರುವ ಕುರಿತು ಮಾತನಾಡಿದ ಅವರು, ವಿಚಾರಣೆ ಎದುರಿಸಲಿ ತಪ್ಪೇನಿದೆ. ಯಾವುದೇ ತನಿಖಾ ಸಂಸ್ಥೆಗಳು ತಪ್ಪು ಕೇಸ್ ದಾಖಲಿಸಲು ಅವಕಾಶವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದರು.
ಇನ್ನು ದೇಶದಲ್ಲಿ ಕಾಂಗ್ರೆಸ್ 54 ವರ್ಷ ಆಡಳಿತ ನಡೆಸಿದ್ದು, ಆಗ ಐಟಿ, ಇಡಿ, ಸಿಬಿಐ ಇರಲಿಲ್ಲವೆ? ಸೋನಿಯಾ ಗಾಂಧಿಗೆ ಈಗ ಯಾವುದೇ ಕಚೇರಿಯಿಲ್ಲ. ಆದರೆ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಏನಾಯಿತು ಮರೆತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.