ಬೆಂಗಳೂರು, ಜು 26 (DaijiworldNews/HR): ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 8 ದಿನದ ಅವಧಿಯಲ್ಲಿ (ಜುಲೈ 18 ರಿಂದ ಜುಲೈ 25) ರಾಜ್ಯದಲ್ಲಿ 344 ಪ್ರಕರಣಗಳು ವರದಿಯಾಗಿವೆ.
ದಕ್ಷಿಣ ಕನ್ನಡದಲ್ಲಿ 13, ಉಡುಪಿಯಲ್ಲಿ 13, ಶಿವಮೊಗ್ಗದಲ್ಲಿ 14, ಬೆಂಗಳೂರಿನಲ್ಲಿ 138 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ 344 ಡೆಂಘಿ ಪ್ರಕರಣಗಳು ದಾಖಲಾಗಿದ್ದು, ಜನವರಿಯಿಂದ ಇದುವರೆಗೂ ರಾಜ್ಯದಲ್ಲಿ3,728 ಡೆಂಗೆ ಪ್ರಕರಣಗಳು ವರದಿಯಾಗಿವೆ.
ಇನ್ನು ಆರೋಗ್ಯ ತಜ್ಞರ ಪ್ರಕಾರ, ಡೆಂಗ್ಯೂನ ಆರಂಭಿಕ ಲಕ್ಷಣಗಳು ಜ್ವರದಂತೆಯೇ ಇರುತ್ತವೆ, ಹಾಗಾಗಿ ಜನರು ಅದನ್ನ ಬಹುಬೇಗ ಗುರುತಿಸುವುದಿಲ್ಲ. ಸಾಮಾನ್ಯವಾಗಿ ಸೋಂಕಿತ ಸೊಳ್ಳೆ ಕಚ್ಚಿದ ನಾಲ್ಕರಿಂದ 10 ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದಿದ್ದಾರೆ.