ಮಧ್ಯಪ್ರದೇಶ, ಜು 25 (DaijiworldNews/HR): ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತನ್ನ ಅಪ್ಪನನ್ನೇ ಕೊಲೆ ಮಾಡಿಸಲು ಫೇಸ್ಬುಕ್ ಮೂಲಕ ಕೊಲೆಗಾರನನ್ನು ನೇಮಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಮನೆಯ ಕೋಣೆಯಲ್ಲಿ ಮಲಗಿದ್ದಾಗ ಮಹೇಶ್ ಗುಪ್ತಾ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದ್ದು, ಇದರಲ್ಲಿ ಅವರ ಮಗನ ಪಾತ್ರವಿದೆ ಎಂದು ಪೊಲೀಸರು ಶಂಕಿಸಿ ವಿಚಾರಣೆ ನಡೆಸಿದ್ದಾರೆ.
ಇನ್ನು ಮಗ ಅಂಕಿತ್ನ ವಿಚಾರಣೆ ನಡೆಸಿದ ಪೊಲೀಸರಿಗೆ ಆತ ಮದ್ಯದ ಚಟ ಮತ್ತು ಜೂಜಾಟ ಮತ್ತು ಇತರ ಅಪರಾಧ ಚಟುವಟಿಕೆಗಳು ಪತ್ತೆಯಾಗಿದ್ದು, ತನ್ನ ಚಟುವಟಿಕೆಗಳಿಗೆ ಹಣ ಕೊಡಲು ನಿರಾಕರಿಸಿದ್ದರಿಂದ ತಂದೆಯ ಮೇಲೆ ಸಿಟ್ಟಿಗೆದ್ದು ಫೇಸ್ಬುಕ್ ಮೂಲಕ ತಂದೆಯನ್ನು ಕೊಲ್ಲಲು ಹಂತಕರನ್ನು ಹುಡುಕಿ ಬುಕ್ ಮಾಡಿರುವುದು ಬೆಳಕಿಗೆ ಬಂದಿದೆ.