ಪುಣೆ, ಜು 25 (DaijiworldNews/MS): ಮಹಾರಾಷ್ಟ್ರದ ಪುಣೆಯಲ್ಲಿ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದೆ ಅಪಘಾತದಲ್ಲಿ ವಿಮಾನದ ಪೈಲಟ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ 11.30ರ ಸುಮಾರಿಗೆ ಪುಣೆಯ ಇಂದಾಪುರ ತಾಲೂಕಿನ ಕಡ್ಬನವಾಡಿ ಗ್ರಾಮದ ಹೊಲದಲ್ಲಿ ತರಬೇತಿ ನಿರತ ವಿಮಾನ ನಿಯಂತ್ರಣ ತಪ್ಪಿ ಬಿದ್ದಿದ್ದು , 22 ವರ್ಷದ ಮಹಿಳಾ ಟ್ರೈನಿ ಪೈಲೆಟ್ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ