ಜಮ್ಮು, ಜು 25 (DaijiworldNews/MS): ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಬ್ ಇನ್ಸ್ಪೆಕ್ಟರ್ ಸೋಮವಾರ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿನ ಪೋಸ್ಟ್ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಸಬ್ ಇನ್ಸ್ಪೆಕ್ಟರ್ ನ್ನು ರಾಮದೇವ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ರಾಜಸ್ಥಾನದ ಸಿಕರ್ ಜಿಲ್ಲೆಯವರಾಗಿದ್ದಾರೆ. . ಬೆಳಿಗ್ಗೆ 6.35ರ ಸುಮಾರಿಗೆ ಕಿರಿಯ ಸಹೋದ್ಯೋಗಿಗಳು ಬಂದಾಗ ಗನ್ ಜೊತೆ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ.
ಸಾವಿನ ಕಾರಣ ಪತ್ತೆಗೆ ಪೊಲೀಸ್ ಮತ್ತು ಬಿಎಸ್ಎಫ್ ಕೋರ್ಟ್ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.