ಹುಬ್ಬಳ್ಳಿ, ಜು 25 (DaijiworldNews/MS): ಅಬ್ಬರಿಸಿ ಬೊಬ್ಬಿರಿದು, ನನ್ನ ಬಾಯಿ ಮುಚ್ಚಿಸಬಹುದು ಎಂದುಕೊಂಡರೆ ಅದು ಖಂಡಿತಾ ಸಾಧ್ಯವಿಲ್ಲ. ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೆಯೇ ಎಂಬುದಾಗಿ ಶಾಸಕ ಜಮೀರ್ ಅಹ್ಮದ್ ಖಾನ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಾರೋ ನನ್ನ ಬಗ್ಗೆ ಇಲ್ಲದ ವದಂತಿ ಹಬ್ಬಿಸಿ, ಅಮೇಲೆ ಬಾಯಿಗೆ ಬಂದಂತೆ ಅಬ್ಬರಿಸಿ ಬೊಬ್ಬಿರಿದು, ನನ್ನ ಬಾಯಿ ಮುಚ್ಚಿಸಬಹುದು ಎಂದುಕೊಂಡರೆ ಅದು ಖಂಡಿತಾ ಸಾಧ್ಯವಿಲ್ಲ. ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೆಯೇ. ನಾನು ಪಕ್ಷ ಪೂಜೆನೂ ಮಾಡುತ್ತೇನೆ, ವ್ಯಕ್ತಿ ಪೂಜೆನೂ ಮಾಡುತ್ತೇನೆ. ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಸಿ.ಟಿ ರವಿ ಅವರು ಹಾಗೂ ಆರ್ ಅಶೋಕ್ ಅವರು ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ, ಒಕ್ಕಲಿಗರ ಬಗ್ಗೆ ನಾನು ಎಲ್ಲಿಯೂ ತಪ್ಪು ಮಾತನಾಡಿಲ್ಲ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅದರಲ್ಲಿ ತಪ್ಪೇನಿದೆ.
ರಾಜಕೀಯದಲ್ಲಿ ನಮ್ಮ ಭವಿಷ್ಯ ನಿರ್ಧರಿಸುವವರು ಜನ ಎಂದಷ್ಟೇ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.