ನವದೆಹಲಿ, ಜು 24 (DaijiworldNews/DB): ಅಕ್ರಮವಾಗಿ ಬಾರ್ ಹೊಂದಿದ್ದಾರೆಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಮೇಲೆ ಆರೋಪ ಹೊರಿಸಿದ್ದ ಕಾಂಗ್ರೆಸ್ ನಾಯಕರಿಗೆ ಸ್ಮೃತಿ ಇರಾನಿ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಕಾಂಗ್ರೆಸ್ ನಾಯಕರದ ಪವನ್ ಖೇರಾ, ಜೈರಾಮ್ ರಮೇಶ್ ಮತ್ತು ನೆಟ್ಟ ಡಿಸೋಜಾ ಅವರಿಗೆ ನೋಟಿಸ್ ನೀಡಲಾಗಿದೆ. ಬೇಷರತ್ ಕ್ಷಮೆ ಯಾಚಿಸದೇ ಇದ್ದಲ್ಲಿ ಮೂವರ ವಿರುದ್ದ ಮಾನನಷ್ಟ ಮೊಕದ್ದೆಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ಬಾರ್ ನಡೆಸುತ್ತಿದ್ದು, ಇದು ಅಕ್ರಮವಾಗಿದೆ ಎಂದು ಕಾಂಗ್ರೆಸ್ ನಾಯಕರು ಶನಿವಾರ ಆರೋಪಿಸಿದ್ದರು. ಇದಕ್ಕೆ ಇಂದು ಲೀಗಲ್ ನೊಟೀಸ್ ಕಳುಹಿಸುವ ಮೂಲಕ ಸ್ಮೃತಿ ಇರಾನಿ ತನ್ನ ಮಗಳ ಚಾರಿತ್ರ್ಯ ವಧೆ ಮಾಡಲಾಗಿದ್ದು, ಮೂವರು ಕಾಂಗ್ರೆಸ್ ನಾಯಕರು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದಲ್ಲೇ ಉತ್ತರ ಹುಡುಕುತ್ತೇನೆ ಎಂದು ತಿಳಿಸಿದ್ದಾರೆ.