ಬೆಂಗಳೂರು, ಜು 24 (DaijiworldNews/DB): ಸಂಬಳದ ಹಣ ಕೇಳಿದ್ದಕ್ಕೆ ಸ್ಪಾ ಮಾಲಕನೊಬ್ಬ ವೃದ್ದೆಗೆ ಅವಾಚ್ಯವಾಗಿ ನಿಂದಿಸಿ ಕಾಲಿನಲ್ಲಿ ಒದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸ್ಪಾ ಮಾಲಕ ಮನೋಜ್ ವೃದ್ದೆಗೆ ಒದ್ದ ಆರೋಪಿ. ಈತ ಕುಮಾರಸ್ವಾಮಿ ಲೇಔಟ್ನಲ್ಲಿ ನಡೆಸುತ್ತಿದ್ದ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಮ್ಮ ಎಂಬ ವೃದ್ದೆ ಹಣಕಾಸಿನ ಸಮಸ್ಯೆಯಿಂದಾಗಿ ಮನೋಜ್ ಬಳಿ ತೆರಳಿ ಸ್ವಲ್ಪ ಹಣ ಬೇಕೆಂದು ಕೇಳಿದ್ದಾಳೆ. ಆದರೆ ಈ ವೇಳೆ ಮನೋಜ್ ವೃದ್ದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಬಾರಿಸಿ ಕಾಲಿನಿಂದ ಒದ್ದಿದ್ದಾನೆ. ಈ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಘಟನೆ ಸಂಬಂಧ ಲಕ್ಷ್ಮಮ್ಮ ಸ್ಪಾ ಮಾಲಕನ ವಿರುದ್ದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಮನೋಜ್ನ ಬಂಧನಕ್ಕಾಗಿ ಇದೀಗ ಪೊಲೀಸರು ಬಲೆ ಬೀಸಿದ್ದಾರೆ.