ನವದೆಹಲಿ, ಜು 24 (DaijiworldNews/DB): ಸಶಸ್ತ್ರ ಪಡೆಗಳ ಮಧ್ಯೆ ಸಮನ್ವಯ ಹೆಚ್ಚಬೇಕು. ಇದಕ್ಕಾಗಿ ತ್ರಿ-ಸೇವೆಗಳ ಜಂಟಿ ಥಿಯೇಟರ್ ಕಮಾಂಡರ್ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜಮ್ಮು ಕಾಶ್ಮೀರ ಪೀಪಲ್ಸ್ ಫೋರಂ ಜಮ್ಮುವಿನಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಸಶಸ್ತ್ರ ಪಡೆಗಳ ಹುತಾತ್ಮರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಶಸ್ತ್ರ ಪಡೆಗಳ ಮಧ್ಯೆ ಸಮನ್ವಯತೆ ಅಗತ್ಯ. ಇದು ಇನ್ನಷ್ಟು ಹೆಚ್ಚಬೇಕು. ನೂತನ ಯೋಜನೆಯಿಂದ ಈ ಉದ್ದೇಶ ಸಾಕಾರವಾಗುತ್ತದೆ. ಕಾರ್ಗಿಲ್ನಲ್ಲಿ ಆಪರೇಶನ್ ವಿಜಯ ಕಾರ್ಯಾಚರಣೆ ನಡೆದಿದ್ದಾಗ ಆದ ಜಂಟಿ ಕಾರ್ಯಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಜಂಟಿ ಥಿಯೇಟರ್ ಕಮಾಂಡರ್ಗಳನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.