ರಾಮನಗರ, ಜು 24 (DaijiworldNews/DB): ನಿಖಿಲ್ಗೆ ಇನ್ನೂ ವಯಸ್ಸಿದೆ. ಅವರು ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ಈವರೆಗೂ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಇದ್ದಲ್ಲಿ ನಾವು ಎಂಬುದು ಸ್ವತಃ ನಿಖಿಲ್ಗೆ ಗೊತ್ತಾಗಿದೆ. ಹೀಗಾಗಿ ಅವರು ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ. ಅವರ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತೇನೆಂದು ನಿಖಿಲ್ ಹೇಳಿದ್ದಾರೆ. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿರವರ ಸ್ಪರ್ಧೆ ಕುರಿತಂತೆಯೂ ಪಕ್ಷವೇ ತೀರ್ಮಾನಿಸಲಿದೆ ಎಂದರು.
ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ತುಂಬಾ ಒತ್ತಡವಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಬೇಡವೆಂದು ನಿಖಿಲ್ಗೆ ಹೇಳಿದ್ದೆನಾದರೂ ಅಲ್ಲಿನ ಶಾಸಕರ ಒತ್ತಡದಿಂದಾಗಿ ಚುನಾವಣೆಗೆ ನಿಂತಿದ್ದರು ಎಂದವರು ಇದೇ ವೇಳೆ ತಿಳಿಸಿದರು.