ಬೆಂಗಳೂರು, ಜು 24 (DaijiworldNews/HR): ಮರಿ ಯಡಿಯೂರಪ್ಪ ಹುಟ್ಟಿಕೊಂಡನಲ್ಲ ಎಂಬ ಸಮಸ್ಯೆಯೂ ಕೆಲವರನ್ನು ಕಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ವಯಸ್ಸಾಯಿತು. ರಾಜಕೀಯ ನಿವೃತ್ತಿಯಾದರು ಎಂಬ ಸಮಾಧಾನದ ಬೆನ್ನಲ್ಲೇ ಮರಿ ಯಡಿಯೂರಪ್ಪ ಹುಟ್ಟಿಕೊಂಡನಲ್ಲ ಎಂಬ ಸಮಸ್ಯೆಯೂ ಕೆಲವರನ್ನು ಕಾಡುತ್ತಿರಬಹುದು ಎಂದರು.
ಇನ್ನು ನಮ್ಮ ಪಕ್ಷದವರಿಗಿಂತ ಬೇರೆ ಪಕ್ಷಗಳ ನಾಯಕರೇ ನನ್ನನ್ನು ಹೆಚ್ಚು ಪ್ರೀತಿ- ವಿಶ್ವಾಸದಿಂದ ಕಾಣುತ್ತಿದ್ದಾರೆ. ಕೆಲವರಿಗೆ ಮರಿ ಯಡಿಯೂರಪ್ಪ ಹುಟ್ಟಿಕೊಂಡನಲ್ಲ ಎಂಬ ಸಮಸ್ಯೆಯೂ ಕಾಡುತ್ತಿರಬಹುದು ಎಂದಿದ್ದಾರೆ.