ಅಮೃತಸರ, ಜು 24 (DaijiworldNews/DB): ಇಂಡಿಗೋ ವಿಮಾನದಲ್ಲಿ ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನನ್ನು ಪಂಜಾಬ್ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತನನ್ನು ಉತ್ತರ ಪ್ರದೇಶ ಮೂಲದವನು ಎನ್ನಲಾಗಿದೆ. ವಿಮಾನವು ಅಮೃತಸರ ಮಾರ್ಗವಾಗಿ ಶ್ರೀನಗರದಿಂದ ಲಕ್ನೋಗೆ ತೆರಳುತ್ತಿತ್ತು. ವಿಮಾನ ಶ್ರೀನಗರದಿಂದ ಹಾರಾಟ ಆರಂಭಿಸಿದಂತೆ ಈತ ಗಗನಸಖಿಯೊಂದಿಗೆ ಅಸಭ್ಯ ವರ್ತನೆ ತೋರಲು ಆರಂಭಿಸಿದ್ದಾನೆ.
ತತ್ಕ್ಷಣ ಅಮೃತಸರ ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತರಲಾಯಿತು. ವಿಮಾನವು ಅಮೃತಸರದಲ್ಲಿ ಇಳಿದ ಕೂಡಲೇ ಪ್ರಯಾಣಿಕನನ್ನು ಭದ್ರತಾ ಸಿಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದರು.