ಮೂಡಿಗೆರೆ, ಜು 24 (DaijiworldNews/DB): ಚಿಕ್ಕಮಗಳೂರಿಗೆ ಪುತ್ತೂರಿನಿಂದ ಪ್ರವಾಸ ತೆರಳಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕೊಟ್ಟಿಗೆಹಾರ ಮತ್ತು ಬಣಕಲ್ ಹೆದ್ದಾರಿಯ ಹೆಬ್ಬರಿಗೆ ಬಳಿ ಭಾನುವಾರ ನಡೆದಿದೆ.
ಕಾರಿನಲ್ಲಿ ದಕ್ಷಿಣ ಕನ್ನಡ ಮೂಲದ ಪುತ್ತೂರಿನ ಆರು ಮಂದಿ ಇದ್ದರು. ಎಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.