ನವದೆಹಲಿ, ಜು 23 (DaijiworldNews/HR): ನಾನು ಗಾಂಧಿ ಕುಟುಂಬದ ವಿರುದ್ಧ ಮಾತನಾಡುತ್ತೇನೆ ಎಂಬ ಕಾರಣಕ್ಕೆ ನನ್ನ ಮಗಳನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಇರಾನಿ ಅವರ ಪುತ್ರಿ ಜೊಯಿಶ್ ಅವರು ನಡೆಸುತ್ತಿರುವ ಗೋವಾದಲ್ಲಿರುವ ದುಬಾರಿ ರೆಸ್ಟೊರೆಂಟ್ ಅಕ್ರಮ ಬಾರ್ ಲೈಸೆನ್ಸ್ ಹೊಂದಿದೆ ಎಂಬ ಆರೋಪದ ಮೇಲೆ ಗೋವಾ ಅಬಕಾರಿ ಆಯುಕ್ತರು ಶೋಕಾಸ್ ನೋಟಿಸ್ ನೀಡಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಇರಾನಿ, ನನ್ನ ಮಗಳು ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂಬ ಆರೋಪ ಸುಳ್ಳಾಗಿದ್ದು,ಕಾಂಗ್ರೆಸ್ ನನ್ನ ಮಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದರು.
ಇನ್ನು 2024ರಲ್ಲಿ ಮತ್ತೆ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಇರಾನಿ ಸವಾಲು ಹಾಕಿದ್ದು, ಅವ್ರು ಮತ್ತೆ ಸೋಲುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.