ನವದೆಹಲಿ, ಜು 23 (DaijiworldNews/DB): ಎನ್ಡಿಎ ಎಂದರೆ ನೋ ಡೇಟಾ ಅವೈಲೇಬಲ್ ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಡೇಟಾ ಲಭ್ಯವಿಲ್ಲದ ಸರ್ಕಾರ ಇದಾಗಿದೆ. ಯಾವತ್ತೂ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ. ಹೊಣೆಗಾರಿಕೆ ಎಂಬುದೇ ಈ ಸರ್ಕಾರಕ್ಕೆ ಇಲ್ಲವಾಗಿದೆ ಎಂದಿದ್ದಾರೆ.
ಕೊರೊನಾ ಅವಧಿಯಲ್ಲಿ ಆಮ್ಲಜನಕ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ ಎಂದು ಹೇಳಿದೆ. ಕೃಷಿ ಮಸೂದೆ ವಿರೋಧಿ ಪ್ರತಿಭಟನೆಯಲ್ಲೂ ಯಾವುದೇ ಸಾವು ಸಂಭವಿಸಿಲ್ಲ ಎನ್ನುತ್ತಿದ್ದಾರೆ. ಲಾಕ್ಡೌನ್ ವೇಳೆ ನಡೆದು ಊರಿಗೆ ಮರಳಿದ ಕಾರ್ಮಿಕರೂ ಮೃತಪಟ್ಟಿಲ್ಲ, ಯಾರ ಮೇಲೆ ಗುಂಪು ಹಲ್ಲೆಯಾಗಲೀ, ಪತ್ರಕರ್ತರ ಬಂಧನವಾಗಲೀ ನಡೆದಿಲ್ಲ. ಏಕೆಂದರೆ ಅವರ ಬಳಿ ಯಾವ ಅಂಕಿ ಅಂಶವೂ ಈ ಬಗ್ಗೆ ಇಲ್ಲ ಎಂದು ಬರೆದುಕೊಂಡಿದ್ದಾರೆ.