ಉತ್ತರ ಪ್ರದೇಶ, ಜು 23 (DaijiworldNews/DB): ಊಟ ಮಾಡುತ್ತಿದ್ದ ವೇಳೆ ಆಗಾಗ ಮಾವಿನ ಹಣ್ಣು ಬೇಕೆಂದು ಕೇಳಿದ ಐದು ವರ್ಷದ ಸೊಸೆಯನ್ನು ಮಾವ ಕೊಲೆ ಮಾಡಿರುವ ಹೇಯ ಘಟನೆ ಉತ್ತರಪ್ರದೇಶದ ಖೇಡಾ ಕುರ್ತಾನ್ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಬಾಲಕಿಯನ್ನು ಕೂಲಿ ಕಾರ್ಮಿಕನ ಮಗಳು ಖೈರು ನಿಶಾ(5) ಎಂದು ಗುರುತಿಸಲಾಗಿದೆ. ಉಮರ್ದೀನ್ ಕೊಲೆ ಮಾಡಿದ ಆರೋಪಿ. ಬಾಲಕಿ ತಂದೆ ನೀಡಿದ ದೂರಿನ ಮೇಲೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಲು ಮಾಡಿಕೊಂಡಿದ್ದಾರೆ. ಬಳಿಕ ಕಳೆದ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ.
ಊಟ ಮಾಡುತ್ತಿದ್ದಾಗ ಪದೇ ಪದೇ ಬಾಲಕಿ ಮಾವಿನ ಹಣ್ಣು ಬೇಕೆಂದು ಕೇಳುತ್ತಿದ್ದಳು. ಇದರಿಂದ ಕುಪಿತನಾದ ಆರೋಪಿ ಮಾವ ಆಕೆಯ ತಲೆಗೆ ರಾಡ್ನಿಂದ ಹೊಡೆದು ಬಳಿಕ ಕುತ್ತಿಗೆ ಸೀಳಿ ಕೊಲೆಗೈದಿದ್ದಾನೆ. ಕೊಲೆ ಮಾಡಿದ ಬಳಿಕ ಆತ ನಾಪತ್ತೆಯಾಗಿದ್ದ. ಬಳಿಕ ಶುಕ್ರವಾರ ರಾತ್ರಿ ಆತನನ್ನು ಬಂಧಿಸಲಾಗಿದೆ ಎಂದು ಶಾಮ್ಲಿ ಎಎಸ್ಪಿ ಒಪಿ ಸಿಂಗ್ ತಿಳಿಸಿದ್ದಾರೆ. ಗ್ರಾಮದ ಸಮೀಪದ ಅರಣ್ಯ ಪ್ರದೇಶದಿಂದ ಆರೋಪಿ ಉಮರ್ದೀನ್ನನ್ನು ಬಂಧಿಸಲಾಗಿದೆ. ಆತನಿಂದ ಆಯುಧಗಳು, ಚಾಕು ಮತ್ತು ಕಬ್ಬಿಣದ ರಾಡ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.