ಮಧುಗಿರಿ, ಜು 23 (DaijiworldNews/HR): ಹಿರಿಯ ನಟ ಶಕ್ತಿಪ್ರಸಾದ್ ಅವರ ಪತ್ನಿ, ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀ ದೇವಮ್ಮ (85) ಅವರು ವಯೋಸಹಜ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ.
img src=https://daijiworld.ap-south-1.linodeobjects.com/Linode/img_tv247/hr-230722-sarja.jpg>
ಲಕ್ಷ್ಮೀದೇವಿ ಅವರನ್ನು 10 ದಿನಗಳ ಹಿಂದೆ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಇಂದು ವಿಧಿವಶರಾಗಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಇಂದು ಸಂಜೆ ಸ್ವಗ್ರಾಮ ಲಕ್ಷ್ಮೀದೇವಿ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಇದಕ್ಕೂ ಮುನ್ನ ಬೆಂಗಳೂರಿನ ನಿವಾಸದಲ್ಲಿ ಕೆಲಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.