ಬೆಂಗಳೂರು, ಜು 23 (DaijiworldNews/DB): ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೇವಲ ನಮ್ಮ ನಾಯಕರಲ್ಲ, ಅವರು ಜನನಾಯಕರು. ಅವರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಲ್ಲದೇ ಮೊದಲ ಬಾರಿಗೆ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದ ಕೀರ್ತಿ ಅವರದು. ಸದ್ಯ ಅವರು ತಾವು ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರವನ್ನು ಮಗನಿಗಾಗಿ ಬಿಟ್ಟು ಕೊಡುವುದಾಗಿ ಹೇಳಿದ್ದಾರೆ. ಆದರೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಖೇರುವಲ್ಲಿ ಶ್ರಮಿಸುವುದಾಗಿಯೂ ಹೇಳಿದ್ದಾರೆ. ಅವರು ನಮಗೂ, ಪಕ್ಷಕ್ಕೂ ಬಲವಿದ್ದಂತೆ ಎಂದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜು. 28ಕ್ಕೆ ವರ್ಷ ಪೂರೈಸಲಿದೆ. ಈ ವೇಲೆ ಗೋಶಾಲೆಗಳ ಗೋವುಗಳನ್ನು ದತ್ತು ಸ್ವೀಕರಿಸುವ ' ಪುಣ್ಯಕೋಟಿ' ಯೋಜನೆಗೆ ಚಾಲನೆ ದೊರೆಯಲಿದೆ. ಆಸಕ್ತರು ಗೋವುಗಳನ್ನು ದತ್ತು ಪಡೆಯಬಹುದು. ವಾರ್ಷಿಕ 11,000 ರೂ. ಶುಲ್ಕ ನಿಗದಿಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.