ಜಮ್ಮು, ಜು 23 (DaijiworldNews/DB): ಜಮ್ಮುವಿನ ಕನ್ಹಚಕ್ ಪ್ರದೇಶದಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ ಸಿಬಂದಿ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಕನ್ಹಚಕ್ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿ ಬಳಿ ಪಾಕ್ನ ಡ್ರೋನ್ ಹಾರಾಡುತ್ತಿರುವುದನ್ನು ಬಿಎಸ್ಎಫ್ ಸಿಬಂದಿ ಗಮನಿಸಿದ್ದಾರೆ. ಕೂಡಲೇ ಕಾರ್ಯತತ್ಪರರಾದ ಅವರು ಡ್ರೋನ್ನತ್ತ ಗುಂಡು ಹಾರಿಸಿದ್ದಾರೆ ಎಂದು ವಕ್ತಾರರು ತಿಳಿಸಿರುವುದಾಗಿ ವರದಿಯಾಗಿದೆ.
ಈ ಪ್ರದೇಶದಲ್ಲಿ ಪಾಕ್ನ ವೈಮಾನಿಕ ದಾಳಿಯನ್ನು ತಪ್ಪಿಸಲು ಹದ್ದಿನ ಕಣ್ಣಿಡಲಾಗಿದೆ. ಜುಲೈ 6 ಮತ್ತು 16ರಂದು ಪೊಂಚ್ ಮತ್ತು ಸಾಂಬಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಹಾರಾಟವನ್ನು ಸಿಬಂದಿ ಪತ್ತೆ ಹಚ್ಚಿದ್ದರು ಎಂದು ತಿಳಿದು ಬಂದಿದೆ.