ಕೊಡಗು, ಜು 23 (DaijiworldNews/DB): ಭಾರೀ ಶಬ್ದದೊಂದಿಗೆ ಕೊಡಗಿನಲ್ಲಿ ಮತ್ತೆ ಭೂ ಕುಸಿತ ಕಾಣಿಸಿಕೊಂಡಿದ್ದ, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ. ಈಗಾಗಲೇ ಬೆಟ್ಟದ ತಪ್ಪಲಿನ 18 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಮದೆನಾಡು ಸುತ್ತಮುತ್ತ ಬೆಳಗ್ಗೆ ಕಂಪನದ ಅನುಭವ ಉಂಟಾಗಿದೆ. ಮದೆನಾಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ 275ರ ಬಳಿಯ ಮದೆನಾಡು, ಜೋಡುಪಾಲ, ಮೊಣ್ಣಗೇರಿ ಗ್ರಾಮಸ್ಥರಲ್ಲಿ ಈ ಕಂಪನ ಮತ್ತು ಭೂಕುಸಿತದಿಂದಾಗಿ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಭಾರೀ ಶಬ್ದದ ಬಳಿಕ ಜೋಡುಪಾಲದವರೆಗೆ ಕೆಸರು ಮಿಶ್ರಿತ ನೀರು ಬಂದಿದ್ದು, ಬೆಟ್ಟದ ತಪ್ಪಲಿನ 18 ಕುಟುಂಬಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ.