ಬೆಂಗಳೂರು, ಜು 22 (DaijiworldNews/HR): ದಕ್ಷಿಣ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ ಕುಖ್ಯಾತ ರೌಡಿಶೀಟರ್ ಕುಳ್ಳು ರಿಜ್ಚಾನ್ನನ್ನು ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕುಳ್ಳು ರಿಜ್ಚಾನ್ ಹತ್ಯೆ ಕೊಲೆ ಯತ್ನ, ಡ್ರಗ್ಸ್ ಸಪ್ಲೈ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದು, ಈತನನ್ನು ಬಂಧಿಸುವುದಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಇನ್ನು ಈತ ಬೆಂಗಳೂರು ದಕ್ಷಿಣ ವಿಭಾಗದ ಭೂಗತ ಲೋಕದ ಪಟ್ಟಕ್ಕಾಗಿ ಯತ್ನಿಸುತ್ತಿದ್ದು, ಕುಳ್ಳು ರಿಜ್ಚಾನ್ನನ್ನು ಇದೀಗ ದಕ್ಷಿಣ ವಿಭಾಗದ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತರಲಾಗಿದೆ.