ಕೊಪ್ಪಳ, ಜು 22 (DaijiworldNews/HR): ಆರೋಪಿಗಳ ಮೇಲೆ ಬೆಂಗಳೂರು, ಚಿಕ್ಕಜಾಲ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕು ಮುಷ್ಟೂರ ಬಳಿ ನಡೆದಿದೆ.
ಡಕಾಯಿತಿ ಕೇಸ್ ನ ಐವರು ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಪೊಲೀಸರು ಆರೋಪಗಳನ್ನ ಬೆನ್ನು ಹತ್ತಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದ ಇಬ್ಬರ ಮೇಲೆ ಗುಂಡೇಟು ಹಾಕಿದ್ದಾರೆ.
ಇನ್ನು ಆರೋಪಿಗಳ ಕಾಲಿಗೆ ಗಾಯವಾಗಿದ್ದು, ಪೊಲೀಸರಿಗೂ ಸಣ್ಣ ಪುಟ್ಟ ಗಾಯವಾಗಿದೆ.
ಆರೋಪಿಗಳ ವಿರುದ್ಧ ಬೆಂಗಳೂರು, ಕೊಪ್ಪಳ, ಬೆಳಗಾವಿ ಇನ್ನಿತರ ಕಡೆ ಡಕಾಯತಿ ಮಾಡಿದ ಕೇಸ್ ಗಳಿದ್ದು, ಗುಂಡೇಟಿನ ಬಳಿಕ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.