ಬೆಂಗಳೂರು, ಜು 22 (DaijiworldNews/HR): 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಐಪಿಎಸ್ ಅಧಿಕಾರಿಗಳು ಆಗಬೇಕೆಂದು ಆಸೆ ಇದ್ದು, ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರನ್ನು ಸ್ವಲ್ಪ ಹೊತ್ತುಗಳ ಕಾಲ ಐಪಿಎಸ್ ಅಧಿಕಾರಿಗಳಾಗಿ ಮಾಡಿದ್ದು, ಇದರಿಂದ ಆ ಮಕ್ಕಳ ಕನಸು ನನಸಾಗಿದೆ.
ಈ ಕುರಿತಾಗಿ ಬೆಂಗಳೂರಿನ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಐಪಿಎಸ್ ಅಧಿಕಾರಿ ಸಿ.ಕೆ.ಬಾಬಾ ಅವರು ಪೊಲೀಸ್ ಸಮವಸ್ತ್ರದಲ್ಲಿರುವ ಮಕ್ಕಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಈ ಮಕ್ಕಳು ಕಠಿಣ ರೋಗದ ವಿರುದ್ಧ ಹೋರಾಡುತ್ತಿದ್ದಾರೆ ಅವರ ಆಸೆಯನ್ನು ನನಸಾಗಿಸುವಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸಿದ್ದೇನೆ ಎಂದರು.
ಇನ್ನು ಈ ಮಕ್ಕಳ ಆಸೆಯನ್ನು ನೆರವೇರಿಸುವುದಕ್ಕಾಗಿ ಕೆಲವು ಗಂಟೆಗಳ ಕಾಲ ಮಾತ್ರ ಅವರನ್ನುಐಪಿಎಸ್ ಅಧಿಕಾರಿಗಳಾಗಿ ಮಾಡಲಾಗಿದೆ. ಹಾಗಾಗಿ ಅವರಿಗೆ ಸಂತೋಷ ಮತ್ತು ನಮಗೆ ಸಂತೃಪ್ತಿ ಆಗಿದೆ ಎಂದು ಹೇಳಿದ್ದಾರೆ.