ಮೈಸೂರು, ಜು 21 (DaijiworldNews/DB): ಬಿಜೆಪಿಗೆ ಹೋಗಬೇಡ ಎಂದು ನನ್ನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಗೆ ಕರೆದಿಲ್ಲ,ಜೆಡಿಎಸ್ ನಲ್ಲೇ ಇರಲೂ ಹೇಳಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಹೇಳಿದ್ದನ್ನು ನಾನು ಈಗ ಬಹಿರಂಗವಾಗಿ ಹೇಳಿದ್ದೇನೆ. ಆದರೆ ಮುಂದಿನ ಮೂರು ತಿಂಗಳೊಳಗೆ ನನ್ನ ನಿರ್ಧಾರ ಏನೆಂದು ತೀರ್ಮಾನಿಸುತ್ತೇನೆ ಎಂದರು. ಕಳೆದ ಬಾರಿಯ ಸೋಲಿನಿಂದಾಗಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಅವರಿಗೆ ಆತಂಕ ಇದೆ. ಅದಕ್ಕಾಗಿಯೇ ಅರ್ಜಿ ಹಾಕಿ ಗೆಲ್ಲುವಂತಹ ಸುರಕ್ಷಿತ ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಈಗಿನ ಶಾಸಕರು ಏನು ಕಟ್ಟೆ ಕಡಿದು ಹಾಕಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಶಾಸಕ, ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಎಲ್ಲಾ ಆಗಿದ್ದಾರೆ. ನಾನು ಕೆಲವೇ ತಿಂಗಳು ಮಂತ್ರಿಯಾಗಿದ್ದೆ, ಈಗ ಶಾಸಕನಷ್ಟೇ. ಆದರೆ ನಾನು ಏನು ಅಭಿವೃದ್ಧಿ ಮಾಡಿದ್ದೇನೆಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದರು.