ಹೊಸಪೇಟೆ, ಜು 21 (DaijiworldNews/MS): ವಿವಾಹದ ಆರತಕ್ಷತೆ ವೇಳೆ ಹೃದಯಾಘಾತದಿಂದ ವರ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವಿಜಯನಗರದ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
26 ವರ್ಷದ ಹೊನ್ನೂರ ಸ್ವಾಮಿ ಎಂಬಾತನೇ ಮೃತ ವರನಾಗಿದ್ದಾರೆ
ಹೊನ್ನೂರ ಸ್ವಾಮಿ ಆರತಕ್ಷತೆ ವೇಳೆಯೇ ಎದೆ ನೋವಿನಿಂದ ಕುಸಿದು ಬಿದ್ದಾರೆ. ಆಗ ಗಾಬರಿಯಾದ ಮನೆಯವರು, ಕುಟುಂಬಸ್ಥರೆಲ್ಲ ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪರೀಕ್ಷೆ ಮಾಡಿದ್ದ ವೈದ್ಯರು ಹೊಸಪೇಟೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸೋ ದಾರಿ ಮಧ್ಯೆಯೇ ಆಂಬುಲೆನ್ಸ್ನಲ್ಲಿ ವರ ಹೊನ್ನೂರಸ್ವಾಮಿ ಮೃತಪಟ್ಟಿದ್ದಾರೆ.ಮದುವೆ ಮನೆಯಲ್ಲಿ ಸೂತಕ ಆವರಿಸಿದೆ