ನವದೆಹಲಿ, ಜು 21 (DaijiworldNews/DB): ಭಾರತದ ವಿರುದ್ದ ಜಿಹಾದ್ ಪ್ರಚಾರ ಮಾಡುತ್ತಿದ್ದ ಅಬ್ದುಲ್ಲ ಬಿಹಾರಿ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಸಿಸ್ವಾನಿಯಾ ನಿವಾಸಿ ಅಲಿ ಅಸ್ಗರ್ ಅಲಿಯಾಸ್ ಅಬ್ದುಲ್ಲ ಬಿಹಾರಿ ಎಂಬಾತ ಬಾಂಗ್ಲಾದೇಶದ ನಿಷೇಧಿತ ಜಮಾತ್-ಉಲ್-ಮುಜಾಹಿದ್ದೀನ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ. ಬಿಹಾರದ ಪೂರ್ವ ಚಂಪಾರಣ್ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿ ಈತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಮೂವರು ಅಕ್ರಮ ವಲಸಿಗರು ಸೇರಿದಂತೆ ಬಾಂಗ್ಲಾದೇಶದ ಆರು ಜೆಎಂಬಿ ಸದಸ್ಯರನ್ನು ಈ ಹಿಂದೆ ಮಧ್ಯಪ್ರದೇಶದ ಭೋಪಾಲ್ ನ ಐಶ್ಬಾಗಿಯಲ್ಲಿ ಬಂಧಿಸಲಾಗಿತ್ತು. ಇವರೊಂದಿಗೆ ಅಬ್ದುಲ್ಲ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಜೆಎಂಬಿಯ ಸಿದ್ದಾಂತ ಮತ್ತು ಯೋಜನೆಗಳನ್ನು ಪ್ರಚಾರ ಮಾಡಿ ಯುವಕರನ್ನು ಜಿಹಾದ್ ಗೆ ಪ್ರೇರೇಪಿಸುವ ಕೆಲಸವನ್ನು ಬಂಧಿತರು ಮಾಡುತ್ತಿದ್ದರು. ಅಲ್ಲದೆ ಭಾರತದ ವಿರುದ್ದ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಭೋಪಾಲ್ ಪೊಲೀಸ್ ಠಾಣೆಯಲ್ಲಿ 14 ಪ್ರಕರಣ ದಾಖಲಾಗಿತ್ತು.