ಫಿರೋಜಾಬಾದ್, ಜು 21 (DaijiworldNews/MS): ಟ್ರಕ್ ಮತ್ತು ಬೈಕ್ ಅಪಘಾತದ ವೇಳೆ ಸವಾರೆಯಾಗಿದ್ದ ಎಂಟು ತಿಂಗಳ ಗರ್ಭಿಣಿ ಗರ್ಭದಲ್ಲಿದ್ದ ಶಿಶು ಜೀವಂತವಾಗಿ ಹೊರಬಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 26 ವರ್ಷದ ಕಾಮಿನಿ ಎಂಬ ಗರ್ಭಿಣಿ ತನ್ನ ಪತಿಯೊಂದಿಗೆ ಬೈಕ್ನಲ್ಲಿ ಹೆತ್ತವರ ಮನೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಮುಂದೆ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋದಾಗ ಟ್ರಕ್ ಬೈಕ್ಗೆ ಬಂದು ಗುದ್ದಿದ್ದು, ಕೆಳಕ್ಕೆ ಬಿದ್ದ ಗರ್ಭಿಣಿ ಮೇಲೆ ಟ್ರಕ್ ಹರಿದಿದೆ. ಈ ವೇಳೆ ಮಗು ತಾಯಿಯ ಗರ್ಭದಿಂದ ಹೊರಬಂದಿದೆ. ಈ ದುರ್ಘಟನೆಯಲ್ಲಿ ಕಾಮಿನಿ ಸಾವನ್ನಪ್ಪಿದ್ದು ಆಕೆಯ ಪತಿ ರಾಮು ಮತ್ತು ಮಗು ಸುರಕ್ಷಿತವಾಗಿದೆ.
ಟ್ರಕ್ ಚಾಲಕ ವಾಹನ ಬಿಟ್ಟು ಓಡಿ ಹೋಗಿರುವ ಸನ್ನಿವೇಶ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪತಿ ನೀಡಿರುವ ಮಾಹಿತಿ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದೆ, ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.