ಬೆಂಗಳೂರು, ಜು 21 (DaijiworldNews/DB): ಮುಖ್ಯಮಂತ್ರಿ ಆಗುವ ಆಸೆ ಎಲ್ಲರಿಗೂ ಸಹಜ. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯವೂ ಒಕ್ಕಲಿಗ ಸಮುದಾಯದಂತೆ ದೊಡ್ಡದಿದೆ. ಎಲ್ಲರೂ ಸೇರಿ ಮತ ನೀಡಿದರೆ ನಾನೂ ಮುಖ್ಯಮಂತ್ರಿಯಾಗಬಹುದು. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ ಎಂದರು.
ಸಿದ್ದರಾಮಯ್ಯ ರಾಜ್ಯದಲ್ಲಿ ಮತ್ತೆ ಸಿಎಂ ಆಗಬೇಕು ಎಂಬುದು ನನ್ನ ವೈಯಕ್ತಿಕ ಆಸೆ. ಅವರು ಸಿಎಂ ಆಗಬೇಕೆಂಬ ಆಸೆ ಜನರಿಗೂ ಇದೆ ಎಂದವರು ತಿಳಿಸಿದರು.